ಎಲ್ಲ ಮರೆತಿರುವಾಗ...

Tuesday, February 26, 2008

ಮರೆಯದಿರೋಣ.......

ಭವಿಷ್ಯದ ಕನಸ ಚಪ್ಪರ ಹಾಕಲೋಗಿ..
ವರ್ತಮಾನದ ಚಾಪೆಯ ತುಳಿಯದಿರೋಣ
ಇಂದಿನ ಭವಿಷ್ಯವೇ ನಾಳೆಯ ವರ್ತಮಾನ.

ಮುಗಿಲಲ್ಲಿ ಹಾರುವ ಹಕ್ಕಿಯಾಗಲೋಗಿ..
ಪುಟ್ಟ ಹೆಜ್ಜೆಗಳ ದಿಟ್ಟ ನಡಿಗೆಯ ಮರೆಯದಿರೋಣ.
ಮುಗಿಲಿಂದಿಳಿದ ದಿನ ನಿಲ್ಲಲಾಗದು, ನಡೆಯಲೇಬೇಕು.

ನಾವು ನೀವು ಮರವಾದ ದಿನ ಗಿಡ ನೆಟ್ಟ ಅಮ್ಮನ ಮರೆಯದಿರೋಣ
ಮರ ಹೆಮ್ಮರವಾದ ದಿನ ನೆರಳಿತ್ತ ಅಪ್ಪನ ಕಡೆಗಣಿಸದಿರೋಣ.
ಇಂದಲ್ಲಾ ನಾಳೆ ನಾವು ನೀವು ಅಪ್ಪ ಅಮ್ಮಂದಿರಾಗಲೇ ಬೇಕು.

4 comments:

Sushrutha Dodderi said...

ಪ್ರಿಯ ರಾಜು,

ನಮಸ್ಕಾರ. ಹೇಗಿದ್ದೀ?

ನಿಂಗೊತ್ತಿರೋ ಹಾಗೇ, ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು


ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ

Vishwanatha Krishnamurthy Melinmane said...

Raju,

Chennagi brudyo...alda neenu eethara kavi hange barithe antha gottirle...vasthavakku, ninna kavanakku 100% hondthu nodu...

Bye for now,
Vishwanna...:-)

ರಾಘವೇಂದ್ರ ಕೆಸವಿನಮನೆ. said...

hi raju,
chennagi bardidiri. I think your native is near to Hakkare,in varadalli route?
raaghu kesavinamane

shivu.k said...

ರಾಜು ನಿಮ್ಮ ಕವನ ಜೀವನ ಸತ್ಯಕ್ಕೆ ಹತ್ತಿರವಾಗಿದೆ. good. keep it up.

ಶಿವು.ಕೆ.
ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನನ್ನದು ಫೋಟೊಗ್ರಫಿ ಪ್ರಪಂಚ. ನೀವು ನನ್ನ ಬ್ಲಾಗಿನೊಳಗೆ ಕಾಲಿಟ್ಟರೇ ಅಲ್ಲಿ ನಿಮಗಿಷ್ಟವಾದ ಛಾಯಾಚಿತ್ರಗಳು ಅದರ ಕುರಿತಾದ ಲೇಖನಗಳು ಸಿಗಬಹುದು. ಬನ್ನಿ.

ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com/
ಹೊಸ ರೀತಿಯ ವಿಚಾರದ ಬರವಣಿಗೆಯ ನನ್ನ ಬ್ಲಾಗಿ ವಿಳಾಸ:
http://camerahindhe.blogspot.com/