ಎಲ್ಲ ಮರೆತಿರುವಾಗ...

Friday, September 21, 2007

ವಿಪರ್ಯಾಸ

ಇಲ್ಲಿ ಹತ್ತಿರದವರೆಲ್ಲ ಬಲು ದೂರ
ದೂರದವರೆಲ್ಲ ಅಕ್ಕಪಕ್ಕದಲ್ಲೆ.

ದುಃಖ ಕವಿದಾಗ ಅಳಲಾಗದ ಜನಕ್ಕೆ
ಯಾರೋ ನಕ್ಕಾರೆಂಬ ಭಯ.
ಆದರು ಯಾರದೊ ಮಳ್ಳು ಜೋಕಿಗೆ, ಸುಳ್ಳೆ ನಗು

ಸಮೀಪದ ಸಾವಿಗೆ ಸ್ಪಂದಿಸದ ನಾವು
ಶವ ತುಂಬಿದ ರಸ್ತೆಯಲ್ಲಿ ನಿರ್ಭಾವುಕರು
ರಾತ್ರಿಯ ನೀರವತೆಯಲ್ಲಿ ಪರಿಚಯವೇ ಇಲ್ಲದ
ಪ್ರೀತಿಗೆ ಕಣ್ಣೀರ ಅರ್ಪಣೆ.

ಕೆಳಗಡೆಯ ಮನೆಯವರಿಗೆ,
ನಾವಿನ್ನು ಇಲ್ಲೆ ಎಂಬ ಹಳ ಹಳಿ
ಮೇಲಿನ ಮನೆಯವರಿಗೆ
ಬೀಳುವ ಎತ್ತರ ಅತೀಯಾಯಿತೇನೊ ಎಂಬ ಕಳವಳ.

ಗುರಿಯಿಲ್ಲದ ಗಾಣದ ಎತ್ತುಗಳಂತೆ
ಅವಿರತ ತಿರುಗುವಿಕೆಯ ನಂತರವೂ
ನಾವು ಬಂದು ನಿಲ್ಲುವುದು
ಅದೇ ಹಳೆಯ ಆರಂಭಕ್ಕೆ.

ಸುತ್ತಣ ಜನ ಜಾತ್ರೆ ನೋಡಿದರೆ
ಭಾವನೆಗಳ ಶವ ಸಂಸ್ಕಾರಕ್ಕೆ ಹೊರಟ
ಕುರುಡರೇ ನಾವು -ನೀವು?

4 comments:

ರಂಜನಾ ಹೆಗ್ಡೆ said...

ರಾಜು,
ಚನ್ನಾಗಿ ಬರೆದಿದ್ದಿರಾ.
"ದುಃಖ ಕವಿದಾಗ ಅಳಲಾಗದ ಜನಕ್ಕೆ
ಯಾರೋ ನಕ್ಕಾರೆಂಬ ಭಯ.
ಆದರು ಯಾರದೊ ಮಳ್ಳು ಜೋಕಿಗೆ, ಸುಳ್ಳೆ ನಗು"
ಈ ಲೈನ್ ತುಂಬಾ ಇಷ್ಟ ಆಯಿತು.
ಬೆಂಗಳೂರಿನ ಜೀವನದ ನೈಜ ಚಿತ್ರಣ.
ಕೀಪ್ ಇಟ್ ಅಪ್.
ಕೀಪ್ ಬ್ಲಾಗಿಂಗ್.

Vishwanatha Krishnamurthy Melinmane said...

Chennagi bardideera... Mundvarsu raju...

ಸಿಂಧು sindhu said...

ಹಾಯ್ ನಾಗರಾಜ್,

ಚನಾಗಿದ್ದು ಕವಿತೆ.
...ಅವಿರತ ತಿರುಗುವಿಕೆಯ ನಂತರವೂ
ನಾವು ಬಂದು ನಿಲ್ಲುವುದು
ಅದೇ ಹಳೆಯ ಆರಂಭಕ್ಕೆ...
ನನಗೆ ತುಂಬ ಇಷ್ಟವಾಯಿತು.. ಮತ್ತು ತುಂಬ ನಿಜ.

ಆಗಾಗ ಸಮಯ ಮಾಡಿಕೊಂಡು ಬರೆಯಿರಿ.. ಚೆನ್ನಾಗಿ ಬರೀತೀರಿ..

ವಿಕ್ರಮ ಹತ್ವಾರ said...

ಎರಡು ಮೂರು ನಾಲ್ಕು ....ಓದ್ತಾನೆ ಇದೀನಿ
ಬರೀತಾ ಇರಿ