ಅಲ್ಲೆಲ್ಲೊ ಕಣ್ಣು ಕಿರಿದಾಗಿಸುವ ಅನಂತ ಮರುಭೂಮಿ.
ಇಲ್ಲಿ ಭುವಿಯ ಬಣ್ಣವೇ ಹಸಿರೆಂಬಂತೆ ಕಾನನ.
ಅಲ್ಲೆಲ್ಲೊ ಬದುಕಿಗೆ ಬೇರೆ ಬಣ್ಣವಿಲ್ಲವೆನಿಸುವಂತೆ ಹೆಬ್ಬಂಡೆಗಳು.
ಇಲ್ಲಿ ತುಂಬಿ ತುಳುಕುತ್ತಿರುವ ಸಿರಿತನ.
ಅಲ್ಲೆಲ್ಲೊ ಕರುಳ ಹಿಂಡುವಂತಿರುವ ಬಡತನ.
ಇಲ್ಲಿ ಕಣ್ಣೋಟಕ್ಕೆ ಏಟುಕದ ಗಗನ ಚುಂಬಿಗಳು.
ಅಲ್ಲೆಲ್ಲೊ ನಿಂತರೆ ತಲೆಗೆಟುಕುವ ಗುಡಿಸಲ ತಾಟುಗಳು.
ಆಸ್ತಿಕನ ಭಾವಕ್ಕೆ ದೈವಲೀಲೆ.
ವಿಜ್ಞಾನಿಗೆ ಮುಗಿದ ಕೂತೂಹಲ.
ನನ್ನಂತ ಅಜ್ಞಾನಿಗೆ ಇನ್ನೂ ವಿಸ್ಮಯ.
No comments:
Post a Comment